ಆಂಟಿಯೋಕ್
ಸಿರಿಯದ ರೇವುಪಟ್ಟಣ. ಮೆಡಿಟರೇನಿಯನ್ ಸಮುದ್ರ ತೀರದಲ್ಲಿದೆ. ಅಲೆಕ್ಸಾಂಡರನ ಮರಣಾನಂತರ ಪಶ್ಚಿಮ ಏಷ್ಯದ ಕೆಲವು ಭಾಗಗಳನ್ನಾಳಿದ ಸೆಲ್ಯೂಸಿಡ್ ದೊರೆಗಳ ಕಾಲದಲ್ಲಿ ಗ್ರೀಕ್ ಸಂಸ್ಕøತಿ, ವೈಭವಗಳ ಮತ್ತು ವ್ಯಾಪಾರದ ಅತಿಮುಖ್ಯ ಕೇಂದ್ರಗಳಲ್ಲಿ ಒಂದಾಗಿತ್ತು. ಇಲ್ಲಿಂದ ಗ್ರೀಕ್ ಸಂಸ್ಕøತಿ ಏಷ್ಯದ ಅನೇಕ ಕಡೆಗಳಿಗೆ ಹರಡಿ ಕೆಲವು ಶತಮಾನಗಳ ಕಾಲ ಉಳಿಯುವಂತಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ